ಚಿತ್ರ: ಜನುಮ ಜನುಮದ ಅನುಭಂದ
ಸಾಹಿತ್ಯ: ಚಿ|ಉದಯಶಂಕರ್
ಸಂಗೀತ: ಇಳಯರಾಜ
ಗಾಯನ: ಎಸ್.ಪಿ.ಬಿ, ಎಸ್.ಜಾನಕಿ

ಪ ಪ ಪ ಪ ಪ ಪಾ.. 
ಯಾವ ಶಿಲ್ಪಿ ಕಂಡ ಕನಸೋ ನೀನು?
ಯಾವ ಕವಿಯ ಪ್ರೇಮ ಗೀತೆ ನೀನು?

ಇಂಥ ಅಂದವನ್ನು
ಏ ಏ ಏ ಏ!
ಎಂದು ಕಾಣೆ ನಾನು |೨|
ಇನ್ನು ಎಂದು ಬಿಡೆನು ನಿನ್ನನು

ಪ ಪ ಪ ಪ ಪ ಪಾ.. 
ಯಾವ ಶಿಲ್ಪಿ ಕಂಡ ಕನಸೋ ನೀನು?

ನನಗಾಗಿ ಬಂತು ತಾವರೆ ಹೆಣ್ಣಾಗಿ
ಅರೆ ರೆ ರೆ ರೆ! 
ಸೊಗಸಾದ ಜೋಡಿ ನೈದಿಲೆ ಕಣ್ಣಾಗಿ
ಅರೆ ರೆ ರೆ ರೆ! 
ನಡೆಯು.. ಸೊಗಸು, ನುಡಿಯು.. ಸೊಗಸು
ಬಯಕೆ ತುಂಬಿದೆ.. ಮನವ ಸೇರಿದೆ

ನಿನ್ನ ಮಾತು ಕೇಳಿ ಸೋತೆ
ಪ ಪ ಪ ಪ ಪಾ.. ಅ ಅ ಅ ಆ ಅ ಅ ಅ ಆ
ಪ ಪ ಪ ಪ ಪಾ ..
ನೂರು ಜನ್ಮ ಬಂದರೆನು ನನಗೆ
ನೀನೆ ನನ್ನ ಬಾಳ ಗೆಳೆಯ ಕೊನೆಗೆ
ನನ್ನ ಜೀವ ನೀನು
ಏ ಏ ಏ!
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನೂ

ಆ.. 
ನಿನ್ನಂದ ನಲ್ಲ ಹುಣ್ಣಿಮೆ ಶಶಿಯಂತೆ
ಅರ ರ ರ ರ!
ನೀನಾಡೊ ಮಾತು ಜೇನಿನ ಸವಿಎಂತೆ
ಅರ ರ ರ ರ!
ಒಲವ.. ಸುರಿವ, ನಿನ್ನಾ.. ನುಡಿಗೆ
ಕರಗಿ ಹೋದೆನು.. ಒಲಿದು ಬಂದೆನು

ಸಾಕು ಇನ್ನು ನನಗೆ ನಲ್ಲೆ
ಪ ಪ ಪ ಪ ಪಾ.. ಅ ಅ ಅ ಆ ಅ ಅ ಅ ಆ
ಪ ಪ ಪ ಪ ಪಾ.. 
ಯಾವ ಶಿಲ್ಪಿ ಕಂಡ ಕನಸೊ ನೀನು?
ಯಾವ ಕವಿಯ ಪ್ರೇಮ ಗೀತೆ ನೀನು?

ನನ್ನ ಜೀವ ನೀನು
ಏ ಏ ಏ!
ನಿನ್ನ ಪ್ರಾಣ ನಾನು |೨|
ದೇವರಾಣೆ ನಂಬು ನನ್ನನೂ

ಪ ಪ ಪ ಪ ಪಾ.. 
ಯಾವ ಶಿಲ್ಪಿ? |೩|

Category: ಕನ್ನಡ ಚಿತ್ರಸಾಹಿತ್ಯ
Category: ಜನುಮ ಜುನುಮದ ಅನುಭಂದ ಚಿತ್ರ
ಉದಯಶಂಕರ್ ಸಾಹಿತ್ಯ